ಸೋಮವಾರ, ಜನವರಿ 3, 2011

ಗುರು ನಮನ

ಗುರು ನಮನ

ನಮಿಪೇ ಶ್ರೀ ಸ್ವರ್ಣವಲ್ಲೀಶ,

ನಮಿಪೇ ಶ್ರೀ ಸರ್ವಜ್ನೆಂದ್ರ ಕರಕಮಲ ಸಂಜಾತ ,

ನಮಿಪೇ ಸಕಲ ಭಕ್ತರಿಗೆ ಸನ್ಮಂಗಲವ ನಿಡುವಂಗೆ,

ನಮಿಪೇ ಶ್ರೀ ಗುರು ಗಂಗಾದರೆಂದ್ರ ರಿಗೆ .


ಸಹ್ಯಾದ್ರಿ ಪುರ ದೀಶ,

ಗೋಕರ್ಣ ಮಂಡಲಾ ದೀಪ ,

ಸುದಾಪುರಿ ಪುರ ಈಶ,

ಶಾಲ್ಮಲಾ ತೀರವಾಸ.


ಧರ್ಮ ,ಕರ್ಮಾನುಸ್ಟಾನ ಗಳ ,ಕಟ್ಹೊರ ತಪೂನಿರತ ,

ದ್ಯಾನ, ಜ್ಞಾನಗಳ ಅಗಣಿತ ಬಂಡಾರ ,

ವೇದ ತತ್ತ್ವಗಳ ದಾರ್ಶನಿಕ.


ತಾಯಿ ರಾಜೇಶ್ವರಿಯ ಕ್ರಪಾಚಾರಣದಲ್ಲಿ,

ಶ್ರೀ ಚಂದ್ರಮೌಳೇಶ್ವರ ಸನ್ನಿದಿಯಲ್ಲಿ,

ಶ್ರೀ ಲಕ್ಷ್ಮಿ ನರಸಿಂಹರ ಸೇವೆಗೈಯುತ ,

ಶ್ರೀ ಚಕ್ರ ಪೂಜೆಗೈಯುತ್ತಿರುವ ಯತಿ ಶ್ರೇಷ್ಠ .


ಮನುಕುಲದ ಉಳುವಿಗೆ ಪ್ರಕತಿ ಮಾತೆಯ ರಕ್ಷಣೆಗೆ ,

ಹಸಿರು ಸ್ವಾಮಿಯೆಂದೇ,ಖ್ಯಾತಿ ಹೊಂದಿರುವೆ .

ಲೋಕೊದ್ದಾರದ ಪ್ರವರ್ಥಕನಾಗಿ,

ಭಗವದ್ಗೀತೆ ಅಭಿಯಾನಗೈಯುತಿರುವೆ .


ನೀವು ತೋರಿದ ದಾರಿ ,

ನಮಗೆ ಮುಕ್ತಿಯ ಮಾರ್ಗ ,

ಇದೋ ನನ್ನ ನಮನ ಗುರು ಚರಣಕೆ,

ಬೇಡುವೆನು ನಿಮ್ಮ ಕಾರುಣ್ಯ ರಕ್ಷೆ ನಮ್ಮೆಲ್ಲರಿಗೆ.