
ವಸಂತನ ನಿರೀಕ್ಷೆ
ಶಿಶಿರ ರ್ರುತು ಕಳೆದು
ಛಳಿಯ ಮುಸುಕನು ತೆಗದು
ವಸಂತನ ಆಗಮನಕೆ ಸ್ವಾಗತಿಸುವೆ .
ರ್ರುತು ಕರ್ತ ದಿವಾಕರನು
ತನ್ನ ಪ್ರಕರತೆಯ ಹೆಚ್ಚಿಸುತ
ನಿನ್ನಗಮಾನವ ಸುಚಿಸುತಿಹನು
ಆಷಾಡದ ಜಡಿಮಳೆಗೆ ಮಯೋಡ್ಡಿ
ಮಾಗಿ ಚಳಿಗೂ ಹೆದರದೆ
ನಿನ್ನಾಗಮನಕೆ ಹಂಬಲಿಸುತಿರುವೆ
ರಾಮನ ಬರವನು ಶಬರಿ ಕಾಯ್ದಂತೆ
ಅನೂ ದಿನವೂ ನಾ ಇಲ್ಲೆನಿಂತು
ನಿನಗಾಗಿ ಕಾಯುತಿಹೆನು
ನಿನ್ನ ನಿರೀಕ್ಷೆಯಲಿ ನಾ
ಬಸವಳಿದು ಒಣಗಿ ಸುಸ್ತಾಗಿ
ನಿನ್ನ ಸ್ವಾಗತಕೆ ನಿಂತಿರುವೆ
ಬೇಗ ಬಾ ವಸಂತ ,ನನ್ನೊಡಲ ತುಂಬು
ನನಗೆ ಹೊಸ ಚೈತನ್ಯವ ನೀಡು
ಒಣಗಿ ನಿಂತ ನನ್ನ ಬಾಳ ಹಸುರಾಗಿಸು
ಇದೋ ನನ್ನ ಸ್ವಾಗತವು ನಿನಗೆ
ನನ್ನಂತೆ ಸಕಲ ಜೀವಿಗಳು ಕಾದಿಹರು
ಊದ್ದರಿಸು ಜಗಕೆ ಹೊಸ ಚೈತನ್ಯ ನೀಡಿ
kavana tumba chennaagiddu... :) nangu helkodooooo kavana bariyadaa...!!!!!
ಪ್ರತ್ಯುತ್ತರಅಳಿಸಿthanks.ningu sannake eddaga ukg classnalli helikottidnala shaktivahiniyalli bandittala .nenapillya?
ಪ್ರತ್ಯುತ್ತರಅಳಿಸಿ